ಈ ಶಾಸನ ಬೆಂಗಳೂರಿನ ಬಳೆಪೇಟೆ ರಂಗನಾಥಸ್ವಾಮಿ ದೇವಾಲಯದಲ್ಲಿದೆ. ಇದು ಸುಮಾರು ೪.೧೦f ಉದ್ದ ಮತ್ತು ೧.೪f ಅಗಲ ಇದೆ. ಇದು ಸ್ಥಾಪನೆಯಾದ ವರ್ಷ ಸುಮಾರು ಕ್ರಿ.ಶ ೧೬೨೮. == ಇತಿಹಾಸ == ಈ ಶಾಸನ ವಿಜಯನಗರ ಸಾಮ್ರಾಜ್ಯದ ರಾಮದೇವರಾಯ ಆಳ್ವಿಕೆಯ ಕಾಲದ್ದಾಗಿದೆ, ಇದರ ರಾಜಧಾನಿ ಇಂದಿನ ವೆಲ್ಲೂರಿನಲ್ಲಿತ್ತು. ಇದು ಬೆಂಗಳೂರಿನ ಕೆಲವೇ ತೆಲುಗು ಶಾಸನಗಳಲ್ಲಿ ಒಂದಾಗಿದೆ. ಇದರಲ್ಲಿ ಬಳೆಪೇಟೆಯ ಸ್ಥಾಪಕರಾದ ಒಂದನೇ ಕೆಂಪೇಗೌಡರ ಬಗ್ಗೆ ಉಲ್ಲೇಖ ಇದೆ. ಬೇರೆ ಬೇರೆ ಊರುಗಳಿಂದ ಇಲ್ಲಿಗೆ ಬಂದ ವ್ಯಾಪಾರಸ್ಥರು ಮತ್ತು ಇತರ ಮಂದಿ ಮುತ್ಯಾಳಪೇಟೆ ರಂಗನಾಥಸ್ವಾಮಿ ದೇವರಿಗೆ ಸಲ್ಲಿಸಿದ ಅನುದಾನಗಳ ಬಗ್ಗೆ ತಿಳಿಸಲಾಗಿದೆ. ಇದು ಆ ಕಾಲದಲ್ಲಿ ಸುತ್ತಮುತ್ತಲಿದ್ದ ಪ್ರದೇಶಗಳ ಬಗ್ಗೆ ಮತ್ತು ಪ್ರದೇಶದ ಸಂಬಂಧಗಳ ಬಗ್ಗೆ ತಿಳಿಸಿದೆ. ಶಾಸನದಲ್ಲಿ ಉಲ್ಲೇಖಿಸಲಾದ ಕೆಲವು ಸ್ಥಳಗಳು ಪೆನುಗಂಡಾ, ಬೆಂಗಳೂರು, ಗುಲೂರು, ಚಿಕ್ಕನಾಯಕನಹಳ್ಳಿ, ಬಲ್ಲಪುರಂ, ಬೇಲೂರು, ಹೆಬ್ಬೂರು, ತದಾಪತ್ರಿ, ಅವನಿ, ಕಾವೇರಿಪಟ್ನಮ್, ರಾಯಕೋಟಾಯ್, ಶ್ರೀರಂಗಪಟ್ಟಣ, ನರಸಪುರ, ಬೆಲ್ಲುರು, ಹೆಬ್ಬೂರು, ನಾಗಮಂಡಲ ಮತ್ತು ಹಿಕೆರಿ. ಈ ಶಾಸನದ ಬಗ್ಗೆ ಎಪಿಗ್ರಫಿಯ ಆಫ್ ಕರ್ನಾಟಿಕ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. == ಶಾಸನಗ ಬರಹ == == ಅರ್ಥ ವಿವರಣೆ == () —- . ( ), . - -- -, , :—, -, - -' , -' , -- ;— ;— . , ( ) -, , , ( ) ... . . ,— , ,-— -, () . . == ವಿಶೇಷತೆ == ಇದು ಒಂದನೇ ಕೆಂಪೇಗೌಡರ ಹೆಸರನ್ನು ಉಲ್ಲೇಖಿಸಿದ ಬೆಂಗಳೂರಿನ ಏಕೈಕ ಶಾಸನವಾಗಿದೆ. ಈ ಶಾಸನವು ಬೆಂಗಳೂರಿಲ್ಲಿರುವ ಎರಡು ಏಕೈಕ ತೆಲುಗು ಶಾಸನಗಳಲ್ಲಿ ಒಂದಾಗಿದೆ. == ಉಲ್ಲೇಖಗಳು == == ಹೊರಕೊಂಡಿಗಳು == ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ , ., , 19May2018 ,